ಕಚೇರಿಗೆ ಹೋಗುವಾಗ ಅಥವಾ ಬೇರೆ ಯಾವುದೇ ಸಮಾರಂಭಕ್ಕೆ ಹೋಗಲು ತಯಾರಾಗುವಾಗ ತ್ವಚೆಯು ತುಂಬಾ ಕಾಂತಿಯುತವಾಗಿ ಹೊಳೆಯುತ್ತಾ ಇರಬೇಕೆಂದು ಬಯಸುವಂತಹ ಮಹಿಳೆಯರು ಇದಕ್ಕಾಗಿ ನಾನಾ ರೀತಿಯ ಕ್ರೀಮ್ ಹಾಗೂ ಇನ್ನಿತರ ಉತ್ಪನ್ನಗಳನ್ನು ಬಳಸಿಕೊಳ್ಳುವರು. ಪ್ರತಿದಿನವೂ ತ್ವಚೆಯ ಕಾಂತಿಯನ್ನು ಕಾಪಾಡಿಕೊಳ್ಳುವುದು ಸವಾಲಿನ ಕೆಲಸ. ಅದರಲ್ಲೂ ಕಚೇರಿ ಹಾಗೂ ಮನೆಯ ಕೆಲಸಗಳನ್ನು ನಿರ್ವಹಿಸಬೇಕಾದ ವೇಳೆ ಸಮಯದ ಅಭಾವದಿಂದಾಗಿ ಹೆಚ್ಚಿನ ಮಹಿಳೆಯರಿಗೆ ತ್ವಚೆಯ ಆರೈಕೆ ಮಾಡಲು ಸಾಧ್ಯವಾಗದು. ಅದರಲ್ಲೂ ಬೆಳಗ್ಗೆ ಎದ್ದು ಕಚೇರಿಗೆ ತಯಾರಾಗಬೇಕಾಗುತ್ತದೆ. ಬಿಸಿಲಿಗೆ ಮೈಯೊಡ್ಡುವ ಕಾರಣದಿಂದಲೂ ತ್ವಚೆಯ ಕಾಂತಿಯು ಮಂಕಾಗುವುದು. ಇದಕ್ಕಾಗಿಯೇ ಬೋಲ್ಡ್ ಸ್ಕೈ ನಿಮಗೆ ಕೆಲವೊಂದು ಸರಳವಾಗಿರುವಂತಹ, ಬೆಳಗ್ಗೆ ಮಾಡಿಕೊಳ್ಳಬಹುದಾದ ತ್ವಚೆಯ ಆರೈಕೆಯ ವಿಧಾನಗಳನ್ನು ಹೇಳಲಿದೆ. ಇದರಿಂದ ತ್ವಚೆಯು ಕಾಂತಿಯುತವಾಗುವುದರಲ್ಲಿ ಯಾವುದೇ ಸಂಶಯವಿಲ್ಲ.